Welcome Guest
Date:2010/09/07
*** Now enjoy unlimited messaging in India ****
Kannada News

ಬಿಹಾರ ಆಖಾಡಕ್ಕೆ ಮುಹೂರ್ತ; ಅ.21ರಿಂದ ಚುನಾವಣೆ :ನವದೆಹಲಿ: ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 21ರಿಂದ ಆರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 24ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಮೊದಲ ಹಂತದ ಚುನಾವಣೆ ಅಕ್ಟೋಬರ್ 21ರಂದು 47 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದ್ದರೆ, ಎರಡನೇ ಹಂತದ ಮತದಾನ ಅಕ್ಟೋಬರ್ 24ರಂದು 45 ಸ್ಥಾನಗಳಿಗಾಗಿ ನಡೆಯುತ್ತದೆ.    Click to read complete description



ಬಾಲ ಕಾರ್ಮಿಕ ಪದ್ಧತಿ ನಿಲ್ಲಿಸಿ: ಬಾಂಗ್ಲಾ ಸರಕಾರಕ್ಕೆ ಕೋರ್ಟ್ :ಢಾಕಾ: ದೇಶಾದ್ಯಂತ ಇರುವ ಹಲವು ಕೈಗಾರಿಕಾ ಕಂಪನಿಗಳಲ್ಲಿ ಬಾಲಕಾರ್ಮಿಕರು ದುಡಿಯುತ್ತಿದ್ದು, ವರ್ಷದೊಳಗೆ ದೇಶದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಕಡಿವಾಣ ಹಾಕಬೇಕು ಎಂದು ಹೈಕೋರ್ಟ್ ಬಾಂಗ್ಲಾದೇಶ ಸರಕಾರಕ್ಕೆ ನಿರ್ದೇಶನ ನೀಡಿದೆ.    Click to read complete description



ನೇಪಾಳ ಬಿಕ್ಕಟ್ಟು ಮುಂದುವರಿಕೆ: ಪ್ರಧಾನಿ ಆಯ್ಕೆ ಅತಂತ್ರ :ಕಾಠ್ಮಂಡು: ನೇಪಾಳ ಸಂಸತ್ ಭಾನುವಾರ ಆರನೇ ಬಾರಿಗೆ ನಡೆಸಿದ ಪ್ರಧಾನಿ ಆಯ್ಕೆಯ ಚುನಾವಣೆಯಲ್ಲಿ ನೂತನ ಪ್ರಧಾನಿ ಆಯ್ಕೆ ವಿಫಲವಾಗುವ ಮೂಲಕ ರಾಜಕೀಯ ಬಿಕ್ಕಟ್ಟು ಮುಂದುವರಿದಂತಾಗಿದೆ.    Click to read complete description



ರಾಜ್ಯ ಸಾಹಿತ್ಯ ಅಕಾಡೆಮಿ ದೇಶದಲ್ಲಿಯೇ ಮಾದರಿ: ಕೃಷ್ಣಯ್ಯ :ಹಾಸನ: ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕನ್ನಡ ಸಾಹಿತ್ಯದ ಕೆಲಸ ಮಾಡುವಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ದೇಶದಲ್ಲಿಯೇ ಮಾದರಿ ಎನಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.    Click to read complete description



ಭಿನ್ನಮತ-ಕಾಂಗ್ರೆಸ್‌ನಲ್ಲಿ ವಲಸಿಗರ ದರ್ಬಾರ್ ಹೆಚ್ಚಾಗಿದೆ: ಷರೀಫ್ :ಬೆಂಗಳೂರು: ಕೆಪಿಸಿಸಿ ಅಧ್ಯಕ್ಷಗಾದಿಗೆ ಒಂದೆಡೆ ತೆರೆಮರೆಯಲ್ಲಿ ಆಕಾಂಕ್ಷಿಗಳ ಕಸರತ್ತು ನಡೆಯುತ್ತಿದ್ದರೆ, ಮತ್ತೊಂದೆಡೆ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ವಲಸಿಗರಿಂದ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಜಾಫರ್ ಷರೀಪ್ ಆರೋಪಿಸುವ ಮೂಲಕ ಪಕ್ಷದೊಳಗಿನ ಅಸಮಾಧಾನ ಸ್ಫೋಟಗೊಂಡಂತಾಗಿದೆ.    Click to read complete description



ಎಚ್ಚರ...ಖುರೇಷಿ, ಹಯಾತ್ ಹತ್ಯೆಗೆ ತಾಲಿಬಾನ್ ಸಂಚು! :ಪೇಶಾವರ: ಈದ್ ಮಿಲಾದ್ ಸಂದರ್ಭದಲ್ಲಿ ಪಾಕಿಸ್ತಾನ್‌ನ ತೆಹ್ರೀಕ್ ಇ ತಾಲಿಬಾನ್ ಪ್ರಮುಖ ರಾಜಕಾರಣಿಗಳು ಸೇರಿದಂತೆ ವಿಐಪಿಗಳನ್ನು ಹತ್ಯೆಗೈಯುವ ಸಂಚನ್ನು ರೂಪಿಸಿರುವುದಾಗಿ ಪಾಕಿಸ್ತಾನ್ ಗುಪ್ತಚರ ಇಲಾಖೆ ಅಧಿಕೃತವಾಗಿ ಎಚ್ಚರಿಕೆ ನೀಡಿದೆ.    Click to read complete description



ಥೆರೆಸಾ ಅಂಚೆ ಚೀಟಿ :ವಾಷಿಂಗ್ಟನ್: ರೋಮನ್ ಕ್ಯಾಥೊಲಿಕ್ ಸನ್ಯಾಸಿನಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮದರ್ ಥೆರೆಸಾ ಅವರಿಗೆ ಜೀವಿತಾವಧಿಯಲ್ಲೇ ಗೌರವ ಪೌರತ್ವ ನೀಡಿದ್ದ ಅಮೆರಿಕಾ ಇದೀಗ ಅವರ ಸ್ಮರಣಾರ್ಥ ಪೋಸ್ಟಲ್ ಸ್ಟ್ಯಾಂಪುಗಳನ್ನು ಬಿಡುಗಡೆ ಮಾಡಿದೆ.    Click to read complete description



ಜನಾಂಗೀಯ ದಾಳಿಗೆ ಬಲಿ :ಹಾಂಕಾಂಗ್: ಆಗಸ್ಟ್ 24ರಂದು ನಡೆದ ಜನಾಂಗೀಯ ದಾಳಿಗೆ ಬಲಿಯಾಗಿದ್ದಾನೆ ಎಂದು ಹೇಳಲಾಗಿರುವ ಗುರ್ದಾಸ್ಪುರದಲ್ಲಿನ ಮನ್ ಸಂಡ್ವಾಲಾ ಗ್ರಾಮದ ಜತೀಂದರ್ ಸಿಂಗ್ ಎಂಬ ಯುವಕನ ಶವ ಹಾಂಕಾಂಗ್‌ನಿಂದ ತವರಿಗೆ ಬಂದಿದೆ. ಘಟನೆ ಕುರಿತು ಹಾಂಕಾಂಗ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.    Click to read complete description



ಎಂಟು ಉಗ್ರರ ಹತ್ಯೆ :ಮಿರನ್ಶಾಹ್: ಪಾಕಿಸ್ತಾನದ ವಾಯುವ್ಯ ಬುಡಕಟ್ಟು ಪ್ರಾಂತ್ಯ ಉತ್ತರ ವಜಿರಿಸ್ತಾನ ಜಿಲ್ಲೆಯ ದತ್ತಾ ಖೇಲ್ ಗ್ರಾಮದಲ್ಲಿನ ಭಯೋತ್ಪಾದಕರ ಅಡಗುದಾಣದ ಮೇಲೆ ಅಮೆರಿಕಾ ಡ್ರೋನ್ ದಾಳಿ ನಡೆಸಿದ್ದು, ಮೂವರು ವಿದೇಶೀಯರೂ ಸೇರಿದಂತೆ ಎಂಟು ಮಂದಿ ಉಗ್ರರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.    Click to read complete description



ರಾಜ್ಯ ಸರಕಾರ ಸಾಲದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದೆ: ಸಿದ್ದರಾಮಯ್ಯ :ಗುಲ್ಬರ್ಗ: ಒಂದೆಡೆ ರಾಜ್ಯ ಸರಕಾರದ ಖಜಾನೆ ಖಾಲಿಯಾಗಿದೆ. ಇನ್ನೊಂದೆಡೆ ಸಾಲದ ಮೊತ್ತ ಹೆಚ್ಚುತ್ತಲೇ ಇದ್ದು, ಬಿಜೆಪಿ ಸರಕಾರ ಸಾಲದ ಸುಳಿಗೆ ಸಿಲುಕಿ ನಲುಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.    Click to read complete description



ಮುಂಬೈ ದಾಳಿ; ಪಾಕ್ ವಿಚಾರಣೆಗೆ ಭಾರತ ಅವಕಾಶ? :ನವದೆಹಲಿ: ಮುಂಬೈ ದಾಳಿ ಸಂಬಂಧ ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವ ಪಾಕಿಸ್ತಾನದ ಆಯೋಗ ರಚನೆ ಪ್ರಸ್ತಾವನೆಗೆ ಭಾರತ ಮುಕ್ತವಾಗಿದೆ ಎಂದು ಸರಕಾರಿ ಮೂಲಗಳು ಹೇಳಿದ್ದು, ಅಧಿಕೃತ ಮನವಿಯವರೆಗೆ ಕಾಯುವುದಾಗಿ ತಿಳಿಸಿವೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಕಿಸ್ತಾನದ ನ್ಯಾಯಾಲಯಕ್ಕೆ ಹೇಳಿಕೆ ನೀಡಲು ಈಗಾಗಲೇ ಭಾರತ ತನ್ನ ಅಧಿಕಾರಿಗಳಿಗೆ ಒಪ್ಪಿಗೆ ಸೂಚಿಸಿರುವುದರಿಂದ ಇದೀಗ ಪಾಕಿಸ್ತಾನ ಮುಂದಿಟ್ಟಿರುವ ಹೊಸ ಪ್ರಸ್ತಾವನೆಗೆ ಸಹಕರಿಸಲು ನವದೆಹಲಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸರಕಾರಿ ಮೂಲಗಳು ಅಭಿಪ್ರಾಯಪಟ್ಟಿವೆ.    Click to read complete description



ಖರ್ಗೆ, ಧರಂ ರಾಜ್ಯಕ್ಕಾಗಿ ಏನು ಮಾಡಿದ್ದಾರೆ?: ಯಡಿಯೂರಪ್ಪ :ಗುಲ್ಬರ್ಗ: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಇವರು ರಾಜ್ಯದ ಅಭಿವೃದ್ದಿಗಾಗಿ ಏನು ಮಾಡಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.    Click to read complete description



ವೈದ್ಯ ಕಾಲೇಜಿನ ಪ್ರಾಂಶುಪಾಲರನ್ನು ವಜಾಗೊಳಿಸಿ: ಸಿಎಂಗೆ ರೇವಣ್ಣ :ಬೇಲೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ಅಕ್ರಮ ನೇಮಕಕ್ಕೆ ಕಾರಣರಾದ ಹಾಸನ ವೈದ್ಯ ಕಾಲೇಜು ಪ್ರಾಂಶುಪಾಲರನ್ನು ವಜಾಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಲಿ ಎಂದು ಜೆಡಿಎಸ್ ಶಾಸಕಾಂಗ ನಾಯಕ ರೇವಣ್ಣ ಸವಾಲು ಹಾಕಿದ್ದಾರೆ.    Click to read complete description



ನಿವೃತ್ತಿ ಸದ್ಯಕ್ಕಿಲ್ಲ, ಶೀಘ್ರವೇ ಸಂಪುಟ ಪುನಾರಚನೆ: ಪ್ರಧಾನಿ :ನವದೆಹಲಿ: ರಾಜಕೀಯ ನಿವೃತ್ತಿ ಬಗ್ಗೆ ಯೋಚಿಸಿಲ್ಲ ಎಂದು ಹೇಳಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಮುಂದಿನ ಸಂಸತ್ ಅಧಿವೇಶನಕ್ಕೂ ಮೊದಲು ಸಚಿವ ಸಂಪುಟ ಪುನಾರಚನೆ ಮಾಡುವ ಬಗ್ಗೆ ಚಿಂತಿಸುತ್ತಿರುವುದಾಗಿ ತಿಳಿಸಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ ಏಳರಂದು ಆರಂಭವಾಗಲಿದ್ದು, ಅದಕ್ಕೂ ಮೊದಲು ಸಂಪುಟ ಪುನಾರಚನೆ ಮಾಡುವ ಆಯ್ಕೆಗಳ ಕುರಿತು ಗಮನ ಹರಿಸುವುದಾಗಿ ಪ್ರಧಾನಿ ಹೇಳಿದ್ದಾರೆ.    Click to read complete description



ಪಾಕ್‌ ನದಿಗೆ ಭಾರತ ನೀರು ಬಿಟ್ಟಿದ್ದೇ ಪ್ರವಾಹಕ್ಕೆ ಕಾರಣ: ಸಯೀದ್ :ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪ್ರವಾಹ ಸ್ಥಿತಿ ಬರಲು ನೆರೆಯ ಭಾರತ ಪಾಕಿಸ್ತಾನದ ನದಿಗಳಿಗೆ ನೀರನ್ನು ಬಿಟ್ಟಿರುವುದೇ ಪ್ರಮುಖ ಕಾರಣ ಎಂದು ಜೆಯುಡಿ ವರಿಷ್ಠ, ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಮೊಹಮ್ಮದ್ ಸಯೀದ್ ಆರೋಪಿಸಿದ್ದಾರೆ.    Click to read complete description



ಅಕ್ಷರಧಾಮ ದೇಗುಲ ದಾಳಿ; ಉಗ್ರರ ಗಲ್ಲು ಶಿಕ್ಷೆಗೆ ತಡೆಯಾಜ್ಞೆ :ನವದೆಹಲಿ: ಗುಜರಾತ್‌ನ ಅಕ್ಷರಧಾಮ ದೇಗುಲದ ಮೇಲೆ ಭಯೋತ್ಪಾದನಾ ದಾಳಿ ನಡೆಸಿದ್ದಕ್ಕಾಗಿ ಮರಣ ದಂಡನೆ ಶಿಕ್ಷೆ ತೀರ್ಪು ಪಡೆದುಕೊಂಡಿದ್ದ ಮೂವರು ವ್ಯಕ್ತಿಗಳಿಗೆ ಸರ್ವೋಚ್ಚ ನ್ಯಾಯಾಲಯವು ನಿಟ್ಟುಸಿರು ಬಿಡುವಂತೆ ಮಾಡಿದೆ. ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ, ಗುಜರಾತ್ ಸರಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ.    Click to read complete description



ಅಕ್ರಮದಲ್ಲಿ ಎಚ್‌ಡಿಕೆ ಕುಟುಂಬ; ಸಿಎಂಗೆ ತಲೆ ಕೆಟ್ಟಿದೆ: ಎಚ್‌ಡಿಕೆ :ಬೆಂಗಳೂರು: ಗುಲ್ಬರ್ಗಾ ದಕ್ಷಿಣ, ಕಡೂರು ಕ್ಷೇತ್ರದ ಉಪ ಚುನಾವಣೆಯ ಪ್ರಚಾರದ ಭರಾಟೆಯ ನಡುವೆಯೂ ಅಕ್ರಮ ಗಣಿ ಕಿಡಿ ರಾಜಕೀಯ ಕೆಸರೆಚಾಟ ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹೋದರ ಅಕ್ರಮ ಅದಿರು ಸಾಗಣೆ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.    Click to read complete description



ಸ್ವಲ್ಪ ತಿಳ್ಕಂಡು ಮಾತಾಡ್ರೀ..: ರಾಹುಲ್‌ಗೆ ಬಿಜೆಪಿ ಸಲಹೆ :ಇಂದೋರ್: ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತಾವಧಿಯಲ್ಲಿ ಬಿಹಾರ ಅಭಿವೃದ್ಧಿ ಕಾರ್ಯಗಳಿಲ್ಲದೆ ನಲುಗಿದೆ ಎಂದು ಹೇಳಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ, ರಾಜ್ಯದಲ್ಲಿ ಪ್ರಚಾರ ಮಾಡುವ ಮೊದಲು ಪೂರಕ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದೆ.    Click to read complete description



ಮುತ್ತೂ ಪಡೆಯದೆ ಮುತ್ತಜ್ಜಿಯಾದವಳಿನ್ನೂ ಕನ್ಯೆಯಂತೆ! :ಲಂಡನ್: ಬ್ರಿಟನ್‌ನ ಈ 106ರ ಅಜ್ಜಿ ಕೇವಲ ಕನ್ಯೆ ಮಾತ್ರವಲ್ಲ, ಇಷ್ಟರವರೆಗೂ ಒಂದೇ ಒಂದು ಮುತ್ತನ್ನು ಕೂಡ ಪಡೆಯುವುದು ಅಥವಾ ನೀಡಿದವಳಲ್ಲವಂತೆ. ಇದೇ ತನ್ನ ಸುದೀರ್ಘ ಆಯುಷ್ಯಕ್ಕೂ ಕಾರಣ ಎಂದು ವಾದಿಸುತ್ತಾಳೆ ಬೇರೆ. ಒಂಟಿಯಾಗಿರುವುದರಿಂದ ಜೀವಿತಾವಧಿ ವೃದ್ಧಿಸುತ್ತದೆ ಎಂದು ವಾದ ಮಾಡುತ್ತಿರುವವರಲ್ಲಿ ಕಳೆದ ಶನಿವಾರವಷ್ಟೇ 106ನೇ ಹುಟ್ಟುಹಬ್ಬವನ್ನಾಚರಿಸಿಕೊಂಡ ಇಸಾ ಬ್ಲಿತ್ ಎಂಬ ಈ ಅಜ್ಜಿಯೂ ಸೇರಿದ್ದಾಳೆ.    Click to read complete description



ವಿಎಚ್‌ಪಿ, ಆರೆಸ್ಸೆಸ್, ಬಿಜೆಪಿಗಳಿಂದ ರಾಮಮಂದಿರ ಜಾಗೃತಿ :ನವದೆಹಲಿ: ಅಯೋಧ್ಯೆಯ ಕುರಿತ ಮಹತ್ವದ ತೀರ್ಪು ಇದೇ ಮಾಸಾಂತ್ಯದಲ್ಲಿ ಹೊರ ಬರಲಿರುವ ಹಿನ್ನೆಲೆಯಲ್ಲಿ ತಾನು ಈಗಾಗಲೇ ರಾಮ ಮಂದಿರ ನಿರ್ಮಾಣದ ಕುರಿತ ರಾಷ್ಟ್ರಾಭಿಮಾನವನ್ನು ಬಡಿದೆಬ್ಬಿಸಲು ರಾಷ್ಟ್ರವ್ಯಾಪಿ ಚಳವಳಿಯನ್ನು ಆರಂಭಿಸಿರುವುದಾಗಿ ವಿಶ್ವ ಹಿಂದೂ ಪರಿಷತ್ ತಿಳಿಸಿದೆ. ಜನರ ಧಾರ್ಮಿಕ ಭಾವನೆಗಳನ್ನು ನ್ಯಾಯಾಲಯಗಳು ನಿರ್ಧರಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷತ್ ಒಂದು ಪಕ್ಷವಾಗಿರದ ಹೊರತಾಗಿಯೂ ರಾಮ ಮಂದಿರ ನಿರ್ಮಾಣದ ಕುರಿತು ರಾಷ್ಟ್ರೀಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಗಸ್ಟ್ 16ರಿಂದ ಚಳವಳಿಗೆ ಚಾಲನೆ ನೀಡಲಿದೆ. ಇದು ನವೆಂಬರ್ 16ರವರೆಗೆ ಮುಂದುವರಿಯಲಿದೆ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ಸುರೇಂದ್ರ ಜೈನ್ ತಿಳಿಸಿದ್ದಾರೆ.    Click to read complete description




 

Fatal error: Cannot redeclare readmyfile() (previously declared in /home/eezysms/public_html/veezy/rssfeeds/unhtml.php:12) in /home/eezysms/public_html/veezy/inc/horizmessage.php on line 23